ಬುಕ್ಕ 2

ಒಂದನೇ ಬುಕ್ಕನ ಮೊಮ್ಮಗ ಇಮ್ಮಡಿ ಹರಿಹರನ ಜ್ಯೇಷ್ಠ ಪುತ್ರ. ವಾರಂಗಲ್ಲು ರಾಜ್ಯದ ಮೇಲೆ ಎರಡು ಸಲ ದಂಡೆತ್ತಿ ಹೋಗಿ ಪರಾಜಿತನಾಗಿ ಬಂದ. ತಂದೆಯ ಮರಣಾನಂತರ ಈತ ರಾಜ್ಯಕ್ಕಾಗಿ ತನ್ನ ಸಹೋದರರಾದ ಎರಡನೆಯ ವಿರೂಪಾಕ್ಷ ಮತ್ತು ಒಂದನೆಯ ದೇವರಾಯರೊಡನೆ ಸೆಣಸಬೇಕಾಗಿ ಬಂತು. ಈತ ಕೇವಲ ಎರಡು ವರ್ಷ (1404-06) ಮಾತ್ರ ರಾಜ್ಯವಾಳಿದರೂ ದೇವರಾಯ ಪಟ್ಟಕ್ಕೆ ಬಂದ ಮೇಲೆ ಸುಮಾರು 1417ರ ವರೆಗೆ ಜೀವಿಸಿದ್ದನೆಂದು ತಿಳಿದುಬರುತ್ತದೆ. 	
	(ಬಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ